ತ್ರೇತಾಯುಗ -
   	ವೈದಿಕ ವಾಙ್ಮಯದಲ್ಲಿ ಹೇಳಲ್ಪಟ್ಟ ನಾಲ್ಕು ಯುಗಗಳಲ್ಲಿ ಎರಡನೆಯದು. ಉಳಿದವು ಕೃತ, ದ್ವಾಪರ, ಕಲಿ. ಈ ಯುಗದ ಅಭಿಮಾನ ದೇವತೆ ತ್ರೇತಾ. ಈ ಯುಗಕ್ಕೆ ಮನಷ್ಯ ಮಾನಪ್ರಕಾರ 12,96,000 ವರ್ಷಗಳೆಂತಲೂ ಇದರ ಸಂಧಿ ಸಂಧ್ಯಂಶಗಳನ್ನು ಸೇರಿಸಿದರೆ ದೇವಮಾನ ಪ್ರಕಾರ 600 ವರ್ಷಗಳೆಂತಲೂ ಹೇಳಲಾಗಿದೆ. ಈ ಯುಗದಲ್ಲಿ ಸತ್ಯಧರ್ಮಗಳು ಕೃತಯುಗಕ್ಕಿಂತ ಕಾಲುಭಾಗ ಕಡಿಮೆಯಾಗುತ್ತವೆ. ಈ ಯುಗದ ವರ್ಣ ಕೆಂಪು, ಗುಣ e್ಞÁನ, ಯಜ್ಞಯಗಾದಿಗಳ ಆಚರಣೆಗಳ ಅಗತ್ಯ ಈ ಯುಗದಲ್ಲಿ ಹೆಚ್ಚು ತೀಕ್ಷಣವಾಗಿ ಕಂಡುಬರುತ್ತದೆ. ಜನ ಈ ಯುಗದಲ್ಲಿ ತಮ್ಮ ಕೆಲಸಕ್ಕೆ ಪ್ರತಿಫಲ ಬಯಸುವವರಾಗಿರುತ್ತಾರೆ. ಕೃತಯುಗದಲ್ಲಿ ಒಂದೇ ಆಗಿದ್ದ ವೇದ ಈಗ ನಾಲ್ಕು ಆಗುತ್ತವೆ. ಈ ಯುಗದಲ್ಲಿ ಸ್ಪರ್ಶ ಮಾತ್ರದಿಂದ ಸಂತಾನ ಎನ್ನಲಾಗಿದೆ. 
(ನೋಡಿ- ಯುಗ-1)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ